ಪ್ರೀತಿ ಅಂದ್ರೆ ಇದೇನಾ?

ಪ್ರೀತಿ ಅಂದ್ರೆ ಇದೇನಾ?

ಯಾವ ಹುಡುಗಿನಾ ನೋಡಿದ್ರೂ ನೀನೆ ಅನ್ನಿಸೋ ಭಾವನೆ,
ಎದುರಿಗೆ ಬಂದರೆ, ಎದೆ ಝಲ್ ಅನ್ನೋ ಕಸಿವಿಸಿ..
ಹೇಳಲೋ ಬೇಡವೋ ಅನ್ನೋ ಆತುರದಲ್ಲಿದ್ದಾಗ, ಆ ನಿನ್ನ ಮುಗುಳ್ನಗೆ,
ಅಯ್ಯೋ ಹಸಿರು ನಿಷಾನೆ ಸಿಕ್ತು ಅನ್ನೋವಷ್ಟರಲ್ಲಿ, ನಿಂಗಲ್ಲ ಅದು ಗೆಳತಿಗೆ ಅನ್ನೋ ಕಣ್ನ್ ಸನ್ನೆ…
ನಿನ್ನ ಆ ಕದ್ದು ನೋಡುವ ಆಟ, ಗೆಳತಿಯ ಜೊತೆ ಮಾತಾಡ್ತಾ ನನ್ನ ನೋಡುವ ಕ್ಷಣಗಳು,
ಕ್ಯಾಂಟೀನ್‌ನಲ್ಲಿ ನೀ ಕಾಣದೆ ಹೋದಾಗಿನಾ ದುಗುಡ, ಲೈಬ್ರರಿಯಲ್ಲಿ ನೀ ಬರದೇ ಇರುವಾಗಿನ ಕ್ಷಣ,
ನಾ ನಿನ್ನ ನೋಡ್ತಾ ಇದ್ದರೆ, ನಿನ್ನ ಗೆಳತಿ ನನ್ನೇ ದುರುಗುಟ್ಟಿ ನೋಡುವ ಸಂಭ್ರಮ…
ವಿಪ್ರೊನಲ್ಲಿ, ನಮಗಾಗೆ ಅನ್ನೋ ತರ ಮಾಡಿರೋ ಹೊಸ ಬೃಂದಾವನ,
ಆ ಹುಲ್ಲು ಹಾಸಿನ ಮೇಲೆ ನೀ ಕುಳಿತು ಚಹಾ ಕುಡಿಯುವ ಹೊಸತನ,
ನಾನು ಓದುವ ನೆಪದಲಿ ಬಂದು, ಒಂದಲ್ಲ ಎರಡಲ್ಲ, ಲೆಕ್ಕವೆ ಇಲ್ಲದಷ್ಟು ಚಹಾ ಕುಡಿದು,
ಕಾಯುತಿರುವೆ ನಿನ್ನ ಕ್ಯಾಂಟೀನಿನಲ್ಲಿ, ಲೈಬ್ರರಿಯಲ್ಲಿ, ನಮ್ಮ ಹೊಸ ಬೃಂದಾವನದಲ್ಲಿ…
ನಂಗೆ ಗೊತ್ತು ನಿಂಗೆ ಕನ್ನಡ ಬರುವುದಿಲ್ಲವೆಂದು,
ಆದರೆ ನನ್ನಲ್ಲಿ ಆತ್ಮವಿಶ್ವಾಸ, ನಿನಗೆ ಕನ್ನಡ ಕಲಿಸಿ ಬಿಡುವೆನೆಂದು,
ಕಾಯುತಿರುವೆನು ನೀನಾಗೇ ಬಂದು ಪ್ರೀತಿಯ ತೋಡಿಕೊಳ್ಳುವೆ ಎಂದು,
ಕೊನೇಪಕ್ಷ ಈ ದಿನವಾದರೂ ಹೇಳಿಬೀಡು ನೀನು ನನ್ನವಳೇ ಎಂದು…
ಸಾಕಿನ್ನು ಈ ನಾಡಿನ ಸಹವಾಸ, ಹೋಗಲಿರುವೆನು ಮರಳಿ ನಮ್ಮೂರಿಗೆ ನಾನು,
ಇವತ್ತೋ ನಾಳೆ, ಅನ್ನೋ ಕ್ಷಣಗಣನೆಯಲ್ಲಿ ಇರುವೆನು,
ಬಾ ಗೆಳತಿ ಹೇಳಿಬೀಡು ನಿನ್ನ ಮನಸಿನ ಭಾವನೆಯನ್ನು,
ನಮಗಾಗೆ ಅಲ್ಲವೇ ವ್ಯಾಲಂಟೈನ್ ಕೊಟ್ಟಿರುವದು ಈ ಪ್ರೇಮಿಗಳ ದಿನವನ್ನು,
ನಾನಾಗೇ ಪ್ರೀತಿಯ ನಿನಗೆ ತಿಳಿಸೆನು,
ನಿನಗಾಗೆ ನಾನು ಕಾಯುವೆನು,
ನಿನಗಾಗೆ ಹಾಕಿರುವೆ ಇವತ್ತು ಗುಲಾಬಿ ಬಣ್ಣದ ಅಂಗಿಯನ್ನು,
ತಿಳಿಸಿಬಿಡು ನಿನ್ನ ಪ್ರೀತಿಯ ಸಂದೇಶವನ್ನು …….
ಉತ್ತರ ಭಾರತದ ಹುಡುಗಿಯ ಪ್ರೀತಿಯ ಬಲೆಯಲ್ಲಿ,

ಇದು ಎರಡನೆ ಅಂಕಣ:
ಅದೇನೋ ಗೊತ್ತಿಲ್ಲ, ಯಾಕೋ ಒಂಥರಾ ಹೆದರಿಕೆ ಆಗ್ತಾ ಇದೆ,
ಅವಳು ಇಲ್ಲೊ ಎಲ್ಲೋ ಇದ್ದಾಳೆ ಅನ್ನಿಸ್ತಾ ಇರೋದು ನಿಜವಾಗಿದೆ,
ಎದ್ದು ಸುತ್ತಲೂ ನೋಡಿದರೆ, ಎಮ್ಮ ನನ್ನ ಎದುರಿನ ಸಿಸ್ಟಮ್ ನಲ್ಲೇ ಕೂತಿದಾಳೆ,
ಒರೆಗನ್ನಿನಿಂದ, ಮತ್ತೆ ನನ್ನ ಕೊಲ್ಲುತ್ತಿದ್ದಾಳೆ,
ಇದು ಮೂರನೇ ಬಾರಿ, ನನ್ನ ಸುತ್ತಮುತ್ತಾ ಅಡ್ದಾಡುತ್ತಿದ್ದಾಳೆ,
ಈ ಕಂಪನಿಯಲ್ಲಿ, ನನ್ನಂಥ ಫ್ರೀ ಪೂಲ್ ಜನರೇ ಜಾಸ್ತಿ ಇರುವಾಗ,
ಲೈಬ್ರರಿಯಲ್ಲಿ ಸಿಸ್ಟಮ್ ದಕ್ಕಿಸಿಕೊಳ್ಳಲು ಎಲ್ಲಿಲ್ಲದ ಸ್ಪರ್ಧೆ ಇರುವಾಗ,
ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಓಡಾಡುತ್ತಿರುವ ಈ ಚೆಲುವೆಗೆ,
ತಾಯಿ ಭುವನೇಶ್ವರಿ ಪ್ರೀತಿ ಸಂದೇಶ ತಿಳಿಸಿದಳು ಎಂದುಕೊಳ್ಳಲೇ?
ಅಥವಾ, ಕನ್ನಡವೆಂದರೇನೇ ಪ್ರೀತಿ, ಕನ್ನಡದಲ್ಲಿ ಬರೆದುದದರ ಮಹಿಮೆ ಎಂದುಕೊಳ್ಳಲೇ?
ಏನೇ ಆಗಲಿ, ಅವಳಾಗೇ ಪ್ರೀತಿಯ ತೋಡಿಕೊಂಡರೆ, ನನಗೆ ಸ್ವರ್ಗ ಮೂರೇ ಗೇಣು,
ಬಹುಶಃ, ಕಾಯ್ದು ಬರುವಳೆ, ಇಲ್ಲ ಕಾಯಿಸಿ ಬರುವಳೆ ನಾ ತಿಳಿಯೆನು,
ಅವಳು ಓ.ಕೆ ಅಂದರೆ ವಿಸ್ಮಯದಲ್ಲಿ ಮೂರನೇ ಅಂಕಣ ಬರೆಯುವೆನು,
ಇಲ್ಲ ಎಂದರೆ, ಅದೇ ಅಂಕಣ ಓದುಗರ ಮನಸಿನಲ್ಲೇ ಮುಚ್ಚಿಡುವೆನು…..

Advertisements

One response to “ಪ್ರೀತಿ ಅಂದ್ರೆ ಇದೇನಾ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s